ಸಾರ್ವಭೌಮ~ಗುರುಕುಲಮ್

ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್-ಶ್ರೀಸಂಸ್ಥಾನಗೋಕರ್ಣ

ಭಾರತದ ಉಳಿವಿಗಾಗಿ
ಭಾರತೀಯ ವಿದ್ಯೆ, ಕಲೆಗಳ
ಪುನರುತ್ಥಾನಕ್ಕಾಗಿ
ಭವ್ಯ ಭಾರತದ ಭಾವೀ ಪ್ರಜೆಗಳ
ನಿರ್ಮಾಣಕ್ಕಾಗಿ

 

ಶ್ರೀರಾಮಚಂದ್ರಾಪುರಮಠ

ಬಾಲಕರಿಗಾಗಿ   

ಆರಂಭಿಸುತ್ತಿರುವ ವಿಶಿಷ್ಟ ವಿದ್ಯಾಸಂಸ್ಥೆ

ಸಾರ್ವಭೌಮ~ಗುರುಕುಲಮ್

ಇದು
ಋಷಿಯುಗ-ನವಯುಗ ಶಿಕ್ಷಣಗಳ ಸಮ್ಮಿಲನ

ಸಾರ್ವಭೌಮ~ಗುರುಕುಲಮ್

ವಿಷ್ಣುಗುಪ್ತ~ವಿಶ್ವವಿದ್ಯಾಪೀಠದಲ್ಲಿ ಲಭಿಸಲಿರುವ ಉಚ್ಚ ಶಿಕ್ಷಣದ ಪೀಠಿಕೆಯಾಗಿ ತತ್ಪೂರ್ವ ಶಿಕ್ಷಣ ನೀಡಲು ಬಾಲಿಕೆಯರಿಗೆ ಸನಾತನ ಭಾರತೀಯ ಸಂಸ್ಕಾರದೊಡನೆ ಸಮಕಾಲೀನ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣಗಳನ್ನು ಒದಗಿಸಲು ಜಗದ ಏಕೈಕ ಆತ್ಮಲಿಂಗವಿರುವ ಸುಕ್ಷೇತ್ರ ಗೋಕರ್ಣದಲ್ಲಿ,  ಆಂಜನೇಯನ ಅವತಾರಭೂಮಿಯ ಅತಿನಿಕಟದಲ್ಲಿ, ದೇಶದ ಆಶಾಕಿರಣವಾಗಿ ಉದಯಿಸುತ್ತಿರುವ ವಿದ್ಯಾದೇಗುಲ.

➢ ಭಾರತದಲ್ಲಿ ಆಧುನಿಕ ಶಿಕ್ಷಣವನ್ನು ಅತ್ಯುತ್ತಮವಾಗಿ ನೀಡುವ ಶಾಲೆಗಳಿವೆ.

➢ ವೇದ – ಶಾಸ್ತ್ರಗಳ ಅಧ್ಯಯನವನ್ನು ಉತ್ಕೃಷ್ಟವಾಗಿ ಮಾಡಿಸುವ ಪಾಠಶಾಲೆಗಳಿವೆ.

➢ ಆಧುನಿಕ ಶಿಕ್ಷಣದ ಜೊತೆ ಭಾರತೀಯ ಸಂಸ್ಕಾರವು ಮೇಳೈಸಿದ ಶ್ರೇಷ್ಠ ಶಿಕ್ಷಣ-ಸಂಸ್ಥೆಗಳೂ ಇವೆ.

➢ ಸಂಗೀತ, ನೃತ್ಯ, ಚಿತ್ರಕಲೆಗಳಲ್ಲಿ ಮಕ್ಕಳನ್ನು ಪರಿಣತರನ್ನಾಗಿಸುವ ಕೇಂದ್ರಗಳಿವೆ.

➢ ವಿವಿಧ ಕೌಶಲಗಳಲ್ಲಿ ವಿದ್ಯಾರ್ಥಿಗಳನ್ನು ಸಮರ್ಥರಾಗಿಸುವ ವ್ಯವಸ್ಥೆಗಳಿವೆ.

➢ ಆದರೆ ಇವೆಲ್ಲವನ್ನೂ ಒಳಗೊಂಡ ಸಂಸ್ಥೆಯಿಲ್ಲ.

➢ ಇನ್ನೂ ಹೆಚ್ಚಿನದನ್ನು ನೀಡುವ ಸಂಸ್ಥೆಯು ಇಲ್ಲವೇ ಇಲ್ಲ.

ಹಾಗಾಗಿಯೇ ಶಾಲೆಗಳು ಸಾವಿರವಿದ್ದರೂ ‘ಸಾವಿರದ ಒಂದು’ ಬೇಕು.

ಈ ಹಿನ್ನೆಲೆಯಲ್ಲಿ ಶ್ರೀರಾಮಚಂದ್ರಾಪುರಮಠವು ರೂಪಿಸುತ್ತಿರುವ ಅನುಪಮ ಸಂಸ್ಥೆ

ಸಾರ್ವಭೌಮ~ಗುರುಕುಲಮ್

ಗುರುಕುಲವಿದು ವಿಷ್ಣುಗುಪ್ತ~ವಿಶ್ವವಿದ್ಯಾಪೀಠದ ದ್ವಾರ

ಭಾರತೀಯ ವಿದ್ಯೆ – ಕಲೆಗಳನ್ನು ಬೋಧಿಸಲು ತಕ್ಷಶಿಲೆಯ ಮಾದರಿಯಲ್ಲಿ ಉದಯಿಸುತ್ತಿರುವ ವಿಷ್ಣುಗುಪ್ತ~ ವಿಶ್ವವಿದ್ಯಾಪೀಠದ ಪರಿಸರದಲ್ಲಿಯೇ ಗುರುಕುಲವು ನಡೆಯಲಿರುವುದು. ವಿದ್ಯಾರ್ಥಿನಿಯರಿಗೆ ಬೇರೆಲ್ಲೂ ಸಿಗದ ಮೂರು ಅವಕಾಶಗಳನ್ನು ಕಲ್ಪಿಸುತ್ತದೆ.

  1. ವಿಶ್ವದಲ್ಲಿಯೇ ವಿಶಿಷ್ಟ ಎನ್ನಬಹುದಾದ ವಿಶ್ವವಿದ್ಯಾಪೀಠದ ಪರಿಸರದಲ್ಲಿ, ವಿದ್ಯಾನಿಧಿಗಳೆನ್ನಿಸಿದ ಪ್ರಾಜ್ಞರ ನಡುವೆ ವಾಸ, ವಿದ್ಯಾಭ್ಯಾಸ.
  2. ಭವಿಷ್ಯದಲ್ಲಿ ಭಾರತೀಯವಾದ ಯಾವುದಾದರೂ ವಿದ್ಯೆ-ಕಲೆಗಳಲ್ಲಿ ಮಹಾಪರಿಣತಳನ್ನಾಗಿಸುವ ಹಿನ್ನೆಲೆಯಲ್ಲಿ ಎಳವೆಯಿಂದಲೇ ಮಗುವಿನಲ್ಲಿ ಸುಪ್ತವಾಗಿರುವ ಪ್ರತಿಭೆಯ ಅನ್ವೇಷಣೆ, ತರಬೇತಿ.
  3. ಗುರುಕುಲದ ಅಧ್ಯಯನದ ಬಳಿಕ ವಿಶ್ವವಿದ್ಯಾಪೀಠದಲ್ಲಿ ಪ್ರವೇಶಾವಕಾಶ; ಭಾರತೀಯವಾದ ಯಾವುದೇ ವಿದ್ಯೆ ಅಥವಾ ಕಲೆಗಳಲ್ಲಿ ಉನ್ನತಾಧ್ಯಯನ ನಡೆಸಿ ಪರಿಪೂರ್ಣ ಪರಿಣತಿಯನ್ನು ಸಾಧಿಸಿ ಮಹಾಮೇರುವೆನಿಸುವ ಅಪೂರ್ವ ಅವಕಾಶ.

ದಿವ್ಯ - ಭವ್ಯ - ರಮ್ಯ ಪರಿಸರ

  • ಪಶ್ಚಿಮಸಮುದ್ರದ ಪುಣ್ಯತೀರ.
  • ಶತಶೃಂಗ ಪರ್ವತದ ಪಾವನ ಶಿಖರ.
  • ವಿಶ್ವದ ಏಕೈಕ ಆತ್ಮಲಿಂಗವಾದ ಗೋಕರ್ಣದ ಮಹಾಬಲೇಶ್ವರನ ಸನ್ನಿಧಿ.
  • ಶ್ರೀರಾಮನ ಪರಮಸೇವಕ, ಸೂರ್ಯದೇವನ ವರಶಿಷ್ಯ, ಸರ್ವ-ವಿದ್ಯಾವಿಶಾರದ ಆಂಜನೇಯನ ಜನ್ಮಭೂಮಿ.

ನಾವಿಂದು…

● ಬಾಲಕನಲ್ಲಿ ಮಾನವತೆ-ಭಾರತೀಯತೆ-ಹಿಂದುತ್ವಗಳನ್ನು ಉದ್ಬೋಧಗೊಳಿಸಬೇಕಿದೆ.
{ನಮ್ಮತನ}

● ಸಂಸ್ಕಾರದ ಸಾಣೆಯಿಟ್ಟು, ಮನೆಯ ಮಗುವೆಂಬ ಮಾಣಿಕ್ಯದ ಮಣಿಯನ್ನು ಭಾರತಮಾತೆಯ ಆಭೂಷಣವಾಗಿಸಬೇಕಿದೆ.
{ಸಂಸ್ಕಾರ}

● ಜ್ಞಾನ – ವಿಜ್ಞಾನಗಳಿಂದ ಪರಿಪೂರ್ಣವಾದ ಭಾರತೀಯ ವಿದ್ಯೆ – ಕಲೆಗಳ ಅರಿವನ್ನು ನೀಡಿ ಬಾಲಕನನ್ನು ನೈಜ ಭಾರತೀಯನನ್ನಾಗಿಸಬೇಕಿದೆ.
{ಪಾರಂಪರಿಕ ತಜ್ಞತೆ}

● ನಮ್ಮಂಗಳದ ಬಾಲಕರನ್ನು ಭಾರತಮಾತೆಯ ವರಕುವರರನ್ನಾಗಿಸಬೇಕಿದೆ; ಶ್ರೇಷ್ಠ ಭಾರತಪುರುಷರನ್ನಾಗಿಸಬೇಕಿದೆ.
{ದೇಶಪ್ರೇಮ}

● ಆಧುನಿಕ ಶಿಕ್ಷಣದಲ್ಲಿ ಪರಿಪೂರ್ಣನನ್ನಾಗಿಸಿ ಅವನನ್ನು ಸ್ವಾವಲಂಬಿಯಾಗಿಸಬೇಕಿದೆ.
{ಸ್ವಾವಲಂಬನೆ}

● ಕಲೆ – ಕೌಶಲಗಳಲ್ಲಿ ಪರಿಣತಿ ನೀಡಿ, ಅವನನ್ನು ಸಮಾಜದ ಆನಂದವರ್ಧಕನನ್ನಾಗಿಸಬೇಕಿದೆ.
{ಕಲಾ ಕೌಶಲ}

● ಭಾರತದ ಭವಿಷ್ಯದ ಸಂಪತ್ತಾಗಬಲ್ಲ ಭಾವೀ ಜನನಾಯಕ, ಅಧಿಕಾರಿ, ಉದ್ಯಮಿ, ನ್ಯಾಯವಾದಿ, ವೈದ್ಯ, ತಂತ್ರಜ್ಞ, ಅರ್ಥಶಾಸ್ತ್ರಜ್ಞ, ಲೇಖಕ, ಸಂತ, ಶಿಕ್ಷಕ, ಕಲಾವಿದ, ವಿಜ್ಞಾನಿ, ಜ್ಞಾನಿಗಳನ್ನು ನಿರ್ಮಿಸಬೇಕಿದೆ.
{ಭವಿಷ್ಯ ನಿರ್ಮಾಣ}

● ನಮ್ಮ ಮಗುವನ್ನು ಸರ್ವಗುಣ-ಪರಿಪೂರ್ಣತೆಯ ದ್ವಾರಾ ಸರ್ವರ ಕಣ್ಮಣಿಯಾಗಿಸಬೇಕಿದೆ.
{ಪರಿಪೂರ್ಣತೆ}

ಹೀಗಿರಲಿದೆ ಗುರುಕುಲ

  • ಸ್ಮಾರ್ಟ್ ಕ್ಲಾಸ್ ಸೌಲಭ್ಯ.
  • ನಾಡಿನ ಶ್ರೇಷ್ಠ ಶಿಕ್ಷಕರಿಂದ ಆನ್ ಲೈನ್ ಪಾಠ.
  • ಮಕ್ಕಳನ್ನು ಓದಿಸಲು ಜೊತೆಗೇ ಇರುವ ನುರಿತ ಮೆಂಟರ್ ಗಳು.
  • ಅನುಭವಿ ವಿಷಯತಜ್ಞರೊಂದಿಗೆ ಮಕ್ಕಳ ಸಂವಹನ.
  • ಕನಾ೯ಟಕ ಸ್ಟೇಟ್ ಬೋಡ್೯ ಪಠ್ಯಕ್ರಮದಂತೆ ಪಾಠ – ಪರೀಕ್ಷೆ – ಪದವಿಗಳು.
  • ಆಧುನಿಕ ಪದವಿ ಪಡೆಯಲು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬೇಕಾದ ಅರಿವು – ಸಾಮರ್ಥ್ಯ ವೃದ್ಧಿ.
  • ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಲಭ್ಯ.
  • ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯ.
  • ನಮ್ಮ ಭವ್ಯ ಪರಂಪರೆಯ ಸಮಗ್ರ ಅರಿವು.
  • ಭಾರತದ ಎಲ್ಲ ವಿದ್ಯೆಕಲೆಗಳ ಸಮಗ್ರ ಪರಿಚಯ.
  • ಸಂಸ್ಕಾರಸಂಸ್ಕೃತಿಗಳ ಅಳವಡಿಕೆ.
  • ಕಲೆಗಳಲ್ಲಿ ಪರಿಣತಿ.
  • ಕುಶಲ ಕಲೆಗಳಲ್ಲಿ ತರಬೇತಿ.
  • ಆತ್ಮರಕ್ಷಣೆಯ ಕಲೆಗಳು ಮೇಳೈಸಿದ ಶಿಕ್ಷಣ.
  • ಎಳೆ ವಯಸ್ಸಿನಲ್ಲಿಯೇ ಬಂದಲ್ಲಿ ಅಂಥವರಿಗೆ ಒಂದಕ್ಕಿಂತ ಹೆಚ್ಚು ಭಾರತೀಯ ವಿದ್ಯೆಕಲೆಗಳಲ್ಲಿ ಪರಿಣತಿ.
  • ಪ್ರಕೃತಿಗೆ ತೆರೆದುಕೊಂಡ ಕುಟೀರಗಳಲ್ಲಿ ಮುಕ್ತ ಕಲಿಕೆ.

ರಾಮಾಯಣ, ಮಹಾಭಾರತ, ಪುರಾಣ, ಇತಿಹಾಸಗಳ ಪುಟಗಳನ್ನು ಬೆಳಗಿದ ಮಹಾಪುರುಷರ ಚರಿತ್ರೆಯ ಮೂಲಕ ಭವ್ಯ ವ್ಯಕ್ತಿತ್ವವನ್ನು ನಿರ್ಮಿಸುವ ಜೀವನಪಾಠ ಸ್ವತಃ

ಶ್ರೀಮಜ್ಜಗದ್ಗುರು ಶಂಕರಾಚಾರ್ಯ

ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ.

ತರಗತಿಗಳು

● ಬಾಲಾಧಾರ ೧ : 4ನೆಯ ತರಗತಿ                 ● ಬಾಲಾಧಾರ ೨ : 5ನೆಯ ತರಗತಿ
● ಬಾಲಾಧಾರ ೩ : 6ನೆಯ ತರಗತಿ                 ● ಬಾಲಾಧಾರ ೪ : 7ನೆಯ ತರಗತಿ
● ಬಾಲಾಧಾರ ೫ : 8ನೆಯ ತರಗತಿ                 ● ಬಾಲಾಧಾರ ೬ : 9ನೆಯ ತರಗತಿ
● ಬಾಲಾಧಾರ ೭ : 10ನೆಯ ತರಗತಿ

● ಮೂಲಾಧಾರ ೧ : ಪ್ರಥಮ ಪಿಯುಸಿ
● ಮೂಲಾಧಾರ ೨ : ದ್ವಿತೀಯ ಪಿಯುಸಿ

[ನಾಲ್ಕನೆಯ ತರಗತಿಯಿಂದ ಪ್ರಥಮ ಪಿಯುಸಿಯವರೆಗೆ ಪ್ರವೇಶಾವಕಾಶ.]

ವ್ಯವಸ್ಥೆ

  • ಸ್ವಾದಿಷ್ಟವಾದ, ಆರೋಗ್ಯಕರವಾದ, ದೇಹ-ಮನಸ್ಸುಗಳ ವಿಕಾಸಕ್ಕೆ ಪೂರಕವಾದ ಆಹಾರ.
  • ಸರಳವಾದ, ಸೂಕ್ತವಾದ, ಸುವ್ಯವಸ್ಥಿತವಾದ ವಸತಿ.

ಅಧ್ಯಯನ ವಿಷಯಗಳು

ಭಾಷೆ :

  • ಸಂವಿಧಾನ
  • ಸಾಮಾನ್ಯಜ್ಞಾನ

ಲೋಕಜ್ಞಾನ:

  • ಸಂವಿಧಾನ
  • ಸಾಮಾನ್ಯಜ್ಞಾನ

ಕೌಶಲ:

  • ಕುದುರೆ ಸವಾರಿ
  • ಈಜು
  • ಸಂವಹನ ಕೌಶಲ
  • ನಾಯಕತ್ವ ತರಬೇತಿ

ಗುರುಕುಲಗಳ ಸನಿಹದಲ್ಲಿ ವಿದ್ಯಾರ್ಥಿಗಳಿಗಾಗಿಯೇ ನಿರ್ಮಿತವಾಗುತ್ತಿರುವ ದೇಶೀ ಗೋವುಗಳ ಸಹಜಾವಾಸ- ಪುಟ್ಟ ಗೋಸ್ವರ್ಗ.

ಇದರಲ್ಲಿ:

  • ಗೋಸಂಗ: ಗೋವು-ಕರುಗಳೊಡನೆ ನಿತ್ಯ ಹಿತವಾದ ಒಡನಾಟ; ಎಳೆಯರು ಸಹಜವಾಗಿಯೇ ಇಷ್ಟಪಡುವ ಈ ಸಂಗತಿ ಇಂದು ದುರ್ಲಭ.
  • ಗೋಸೇವೆ: ನಮ್ಮ ಪರಂಪರೆಯು ಪುಣ್ಯಪ್ರದವೆಂದು ಸಾರಿದ ಗೋಸೇವೆಯ ಸದಭ್ಯಾಸ ಎಳವೆಯಿಂದಲೇ.
  • ಗೋಜ್ಞಾನ: ಮೊಗೆದಷ್ಟೂ ಮುಗಿಯದ ಗೋವು-ಗವ್ಯಗಳ ಸುಜ್ಞಾನ ಮಗುವಿನ ಬೊಗಸೆಯಲ್ಲಿ.
  • ಗೋಕ್ಷೀರ: ಮೇಧಾವರ್ಧಕವಾದ ಮತ್ತು ಆರೋಗ್ಯಕಾರಕವಾದ ದೇಶೀ ಗೋವಿನ ಹಾಲೆಂಬ ಅಮೃತದ ನಿತ್ಯಪ್ರಾಪ್ತಿ.

 

ಮಹಾಪುರುಷಚರಿತ್ರೆ:

  • ಕೃತಯುಗದ ಮಹಾಪುರುಷರು
  • ತ್ರೇತಾಯುಗದ ಮಹಾಪುರುಷರು
  • ದ್ವಾಪರಯುಗದ ಮಹಾಪುರುಷರು
  • ಕಲಿಯುಗದ ಮಹಾಪುರುಷರು

{ರಾಮಾಯಣ, ಮಹಾಭಾರತ, ಪುರಾಣ, ಇತಿಹಾಸ, ವರ್ತಮಾನಗಳನ್ನು ಆಧರಿಸಿ.}

ಜ್ಞಾನ:

  • ವೇದಪಥ

{ವೇದಮೂಲವಾದ ಸಮಗ್ರ ಭಾರತೀಯ ವಿದ್ಯೆ-ಕಲೆಗಳ ಪರಿಚಯ}

  • ಸಂಸ್ಕೃತ
  • ಭಗವದ್ಗೀತೆ
  • ಯೋಗ
  • ವ್ಯಾಯಾಮಕೀ
  • ಸ್ವಸ್ಥವೃತ್ತ (ಆಯುರ್ವೇದ)
  • ಸದಾಚಾರ

ಕಲೆ:

  • ಗಾಯನ
  • ವಾದನ
  • ನೃತ್ಯ
  • ಯಕ್ಷಗಾನ
  • ಚಿತ್ರ

ಗೃಹವಿಜ್ಞಾನ:

  • ಪಾಕಶಾಸ್ತ್ರ
  • ಗೃಹನಿರ್ವಾಹ
  • ರಂಗವಲ್ಲಿ
  • ಕಸೂತಿ
  • ಪ್ರಸಾಧನ
  • ವೃಕ್ಷಾಯುರ್ವೇದ

{ಸಸ್ಯಸಂರಕ್ಷಣೆ, ಕೃಷಿ}

ಆತ್ಮರಕ್ಷಣೆ:

  • ಕಳರಿಪಯಟ್
  • ಮಲ್ಲಯುದ್ಧ

4ನೆಯ ತರಗತಿಯಿಂದ 10ನೆಯ ತರಗತಿ {ಕನಾ೯ಟಕ ಸ್ಟೇಟ್ ಬೋಡ್೯ ಪಠ್ಯದಂತೆ}

  • ಇಂಗ್ಲಿಷ್ (English) {4ರಿಂದ 10}
  • ಪರಿಸರ ವಿಜ್ಞಾನ (Environmental Science) {4ರಿಂದ 6}
  • ಗಣಿತ (Mathematics) {4ರಿಂದ 10}
  • ಕಂಪ್ಯೂಟರ್ (Basic computer skills) {4ರಿಂದ 9}
  • ಸಮಾಜ ವಿಜ್ಞಾನ (Social Science) {6ರಿಂದ 10}
  • ವಿಜ್ಞಾನ (Science) {4ರಿಂದ 9}
  • ವಿಜ್ಞಾನ ಮತ್ತು ತಂತ್ರಜ್ಞಾನ (Science and Technology) {10}
  • ಅರ್ಥಶಾಸ್ತ್ರ (Economics) {10}
  • ವ್ಯವಹಾರ ಅಧ್ಯಯನ (Business Studies) {10}
  • ಮನಶ್ಶಾಸ್ತ್ರ (Psychology) {10}
  • ಲೆಕ್ಕಶಾಸ್ತ್ರ (Accountancy) {10}

ಪದವಿ ಪೂರ್ವ ಶಿಕ್ಷಣ (PUC) {ಕನಾ೯ಟಕ ಸ್ಟೇಟ್ ಬೋಡ್೯ ಪಠ್ಯದಂತೆ}

ವಿಜ್ಞಾನ:

  • ಭೌತಶಾಸ್ತ್ರ (Physics)
  • ರಸಾಯನಶಾಸ್ತ್ರ (Chemistry)
  • ಕಂಪ್ಯೂಟರ್ (Computer Science)
  • ಜೀವಶಾಸ್ತ್ರ (Biology)
  • ಗಣಿತ (Mathematics)
  • ಇಂಗ್ಲಿಷ್ (English)

ಕಲೆ:

  • ಮನಶ್ಶಾಸ್ತ್ರ (Psychology)
  • ಸಮಾಜಶಾಸ್ತ್ರ (Sociology)
  • ಇತಿಹಾಸ (History)
  • ಅರ್ಥಶಾಸ್ತ್ರ (Economics)
  • ಸಮೂಹ ಸಂವಹನ (Mass Communication) ಅಥವಾ (or) ರಾಜ್ಯಶಾಸ್ತ್ರ (Political Science)
  • ಇಂಗ್ಲಿಷ್ (English)

ವಾಣಿಜ್ಯ:

  • ಅರ್ಥಶಾಸ್ತ್ರ (Economics)
  • ವ್ಯವಹಾರ ಅಧ್ಯಯನ (Business Studies)
  • ಲೆಕ್ಕಶಾಸ್ತ್ರ (Accountancy)
  • ಗಣಿತ (Mathematics)
  • ಇಂಗ್ಲಿಷ್ (English)

ಶುಲ್ಕ

  •  ಸಾಮಾನ್ಯರಿಗೂ ಕೈಗೆಟಕುವ ಶಿಕ್ಷಣ ಮತ್ತು ಭೋಜನ ಶುಲ್ಕಗಳು.
  • ಶುಲ್ಕವನ್ನು ಪಾವತಿಸಲಾಗದವರಿಗಾಗಿ ವಿದ್ಯಾರ್ಥಿವೇತನದ ವ್ಯವಸ್ಥೆ.

ಲಿಂಕ್ ಬಳಸಿ ಅರ್ಜಿ ತುಂಬಿರಿ:   Click Here

ಅಥವಾ 

QR Code ಸ್ಕ್ಯಾನ್ ಮಾಡಿ ಅರ್ಜಿ ತುಂಬಿರಿ: