ಭಾರತದ ಉಳಿವಿಗಾಗಿ
ಭಾರತೀಯ ವಿದ್ಯೆ, ಕಲೆಗಳ
ಪುನರುತ್ಥಾನಕ್ಕಾಗಿ
ಭವ್ಯ ಭಾರತದ ಭಾವೀ ಪ್ರಜೆಗಳ
ನಿರ್ಮಾಣಕ್ಕಾಗಿ
ಭಾರತದ ಉಳಿವಿಗಾಗಿ
ಭಾರತೀಯ ವಿದ್ಯೆ, ಕಲೆಗಳ
ಪುನರುತ್ಥಾನಕ್ಕಾಗಿ
ಭವ್ಯ ಭಾರತದ ಭಾವೀ ಪ್ರಜೆಗಳ
ನಿರ್ಮಾಣಕ್ಕಾಗಿ
ಆರಂಭಿಸುತ್ತಿರುವ ವಿಶಿಷ್ಟ ವಿದ್ಯಾಸಂಸ್ಥೆ
ಇದು
ಋಷಿಯುಗ-ನವಯುಗ ಶಿಕ್ಷಣಗಳ ಸಮ್ಮಿಲನ
ವಿಷ್ಣುಗುಪ್ತ~ವಿಶ್ವವಿದ್ಯಾಪೀಠದಲ್ಲಿ ಲಭಿಸಲಿರುವ ಉಚ್ಚ ಶಿಕ್ಷಣದ ಪೀಠಿಕೆಯಾಗಿ ತತ್ಪೂರ್ವ ಶಿಕ್ಷಣ ನೀಡಲು ಬಾಲಿಕೆಯರಿಗೆ ಸನಾತನ ಭಾರತೀಯ ಸಂಸ್ಕಾರದೊಡನೆ ಸಮಕಾಲೀನ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣಗಳನ್ನು ಒದಗಿಸಲು ಜಗದ ಏಕೈಕ ಆತ್ಮಲಿಂಗವಿರುವ ಸುಕ್ಷೇತ್ರ ಗೋಕರ್ಣದಲ್ಲಿ, ಆಂಜನೇಯನ ಅವತಾರಭೂಮಿಯ ಅತಿನಿಕಟದಲ್ಲಿ, ದೇಶದ ಆಶಾಕಿರಣವಾಗಿ ಉದಯಿಸುತ್ತಿರುವ ವಿದ್ಯಾದೇಗುಲ.
➢ ಭಾರತದಲ್ಲಿ ಆಧುನಿಕ ಶಿಕ್ಷಣವನ್ನು ಅತ್ಯುತ್ತಮವಾಗಿ ನೀಡುವ ಶಾಲೆಗಳಿವೆ.
➢ ವೇದ – ಶಾಸ್ತ್ರಗಳ ಅಧ್ಯಯನವನ್ನು ಉತ್ಕೃಷ್ಟವಾಗಿ ಮಾಡಿಸುವ ಪಾಠಶಾಲೆಗಳಿವೆ.
➢ ಆಧುನಿಕ ಶಿಕ್ಷಣದ ಜೊತೆ ಭಾರತೀಯ ಸಂಸ್ಕಾರವು ಮೇಳೈಸಿದ ಶ್ರೇಷ್ಠ ಶಿಕ್ಷಣ-ಸಂಸ್ಥೆಗಳೂ ಇವೆ.
➢ ಸಂಗೀತ, ನೃತ್ಯ, ಚಿತ್ರಕಲೆಗಳಲ್ಲಿ ಮಕ್ಕಳನ್ನು ಪರಿಣತರನ್ನಾಗಿಸುವ ಕೇಂದ್ರಗಳಿವೆ.
➢ ವಿವಿಧ ಕೌಶಲಗಳಲ್ಲಿ ವಿದ್ಯಾರ್ಥಿಗಳನ್ನು ಸಮರ್ಥರಾಗಿಸುವ ವ್ಯವಸ್ಥೆಗಳಿವೆ.
➢ ಆದರೆ ಇವೆಲ್ಲವನ್ನೂ ಒಳಗೊಂಡ ಸಂಸ್ಥೆಯಿಲ್ಲ.
➢ ಇನ್ನೂ ಹೆಚ್ಚಿನದನ್ನು ನೀಡುವ ಸಂಸ್ಥೆಯು ಇಲ್ಲವೇ ಇಲ್ಲ.
ಹಾಗಾಗಿಯೇ ಶಾಲೆಗಳು ಸಾವಿರವಿದ್ದರೂ ‘ಸಾವಿರದ ಒಂದು’ ಬೇಕು.
ಈ ಹಿನ್ನೆಲೆಯಲ್ಲಿ ಶ್ರೀರಾಮಚಂದ್ರಾಪುರಮಠವು ರೂಪಿಸುತ್ತಿರುವ ಅನುಪಮ ಸಂಸ್ಥೆ
ಭಾರತೀಯ ವಿದ್ಯೆ – ಕಲೆಗಳನ್ನು ಬೋಧಿಸಲು ತಕ್ಷಶಿಲೆಯ ಮಾದರಿಯಲ್ಲಿ ಉದಯಿಸುತ್ತಿರುವ ವಿಷ್ಣುಗುಪ್ತ~ ವಿಶ್ವವಿದ್ಯಾಪೀಠದ ಪರಿಸರದಲ್ಲಿಯೇ ಗುರುಕುಲವು ನಡೆಯಲಿರುವುದು. ವಿದ್ಯಾರ್ಥಿನಿಯರಿಗೆ ಬೇರೆಲ್ಲೂ ಸಿಗದ ಮೂರು ಅವಕಾಶಗಳನ್ನು ಕಲ್ಪಿಸುತ್ತದೆ.
● ಕನ್ನಿಕೆಯಲ್ಲಿ ಮಾನವತೆ-ಭಾರತೀಯತೆ-ಹಿಂದುತ್ವಗಳನ್ನು ಉದ್ಬೋಧಗೊಳಿಸಬೇಕಿದೆ.
{ನಮ್ಮತನ}
● ಸಂಸ್ಕಾರದ ಸಾಣೆಯಿಟ್ಟು, ಮನೆಯ ಮಗುವೆಂಬ ಮಾಣಿಕ್ಯದ ಮಣಿಯನ್ನು ಭಾರತಮಾತೆಯ ಆಭೂಷಣವಾಗಿಸಬೇಕಿದೆ.
{ಸಂಸ್ಕಾರ}
● ಜ್ಞಾನ – ವಿಜ್ಞಾನಗಳಿಂದ ಪರಿಪೂರ್ಣವಾದ ಭಾರತೀಯ ವಿದ್ಯೆ – ಕಲೆಗಳ ಅರಿವನ್ನು ನೀಡಿ ಬಾಲಕಿಯನ್ನು ನೈಜ ಭಾರತೀಯಳನ್ನಾಗಿಸಬೇಕಿದೆ.
{ಪಾರಂಪರಿಕ ತಜ್ಞತೆ}
● ನಮ್ಮಂಗಳದ ಬಾಲಕಿಯರನ್ನು ಭಾರತಮಾತೆಯ ವರಕುವರಿಯರನ್ನಾಗಿಸಬೇಕಿದೆ; ಶ್ರೇಷ್ಠ ಭಾರತನಾರಿಯರನ್ನಾಗಿಸಬೇಕಿದೆ.
{ದೇಶಪ್ರೇಮ}
● ಆಧುನಿಕ ಶಿಕ್ಷಣದಲ್ಲಿ ಪರಿಪೂರ್ಣಳನ್ನಾಗಿಸಿ ಅವಳನ್ನು ಸ್ವಾವಲಂಬಿಯಾಗಿಸಬೇಕಿದೆ.
{ಸ್ವಾವಲಂಬನೆ}
● ಕಲೆ – ಕೌಶಲಗಳಲ್ಲಿ ಪರಿಣತಿ ನೀಡಿ, ಅವಳನ್ನು ಸಮಾಜದ ಆನಂದವರ್ಧಿನಿಯನ್ನಾಗಿಸಬೇಕಿದೆ.
{ಕಲಾ ಕೌಶಲ}
● ಭಾರತದ ಭವಿಷ್ಯದ ಸಂಪತ್ತಾಗಬಲ್ಲ ಭಾವೀ ಜನನಾಯಕಿ, ಅಧಿಕಾರಿಣಿ, ಉದ್ಯಮಿ, ನ್ಯಾಯವಾದಿನಿ, ವೈದ್ಯೆ, ತಂತ್ರಜ್ಞೆ, ಅರ್ಥಶಾಸ್ತ್ರಜ್ಞೆ, ಲೇಖಕಿ, ಸಾಧ್ವಿ, ಶಿಕ್ಷಕಿ, ಕಲಾವಿದೆ, ವಿಜ್ಞಾನಿ, ಜ್ಞಾನಿಗಳನ್ನು ನಿರ್ಮಿಸಬೇಕಿದೆ.
{ಭವಿಷ್ಯ ನಿರ್ಮಾಣ}
● ನಮ್ಮ ಮಗುವನ್ನು ಸರ್ವಗುಣ-ಪರಿಪೂರ್ಣತೆಯ ದ್ವಾರಾ ಸರ್ವರ ಕಣ್ಮಣಿಯಾಗಿಸಬೇಕಿದೆ.
{ಪರಿಪೂರ್ಣತೆ}
ರಾಮಾಯಣ, ಮಹಾಭಾರತ, ಪುರಾಣ, ಇತಿಹಾಸಗಳ ಪುಟಗಳನ್ನು ಬೆಳಗಿದ ಮಹಾಪುರುಷರ ಚರಿತ್ರೆಯ ಮೂಲಕ ಭವ್ಯ ವ್ಯಕ್ತಿತ್ವವನ್ನು ನಿರ್ಮಿಸುವ ಜೀವನಪಾಠ ಸ್ವತಃ
ಶ್ರೀಮಜ್ಜಗದ್ಗುರು ಶಂಕರಾಚಾರ್ಯ
ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ.
● ಬಾಲಾಧಾರ ೧ : 4ನೆಯ ತರಗತಿ
● ಬಾಲಾಧಾರ ೨ : 5ನೆಯ ತರಗತಿ
● ಬಾಲಾಧಾರ ೩ : 6ನೆಯ ತರಗತಿ
● ಬಾಲಾಧಾರ ೪ : 7ನೆಯ ತರಗತಿ
● ಬಾಲಾಧಾರ ೫ : 8ನೆಯ ತರಗತಿ
● ಬಾಲಾಧಾರ ೬ : 9ನೆಯ ತರಗತಿ
● ಬಾಲಾಧಾರ ೭ : 10ನೆಯ ತರಗತಿ
● ಮೂಲಾಧಾರ ೧ : ಪ್ರಥಮ ಪಿಯುಸಿ
● ಮೂಲಾಧಾರ ೨ : ದ್ವಿತೀಯ ಪಿಯುಸಿ
[ನಾಲ್ಕನೆಯ ತರಗತಿಯಿಂದ ಪ್ರಥಮ ಪಿಯುಸಿಯವರೆಗೆ ಪ್ರವೇಶಾವಕಾಶ.]
ಭಾಷೆ:
ಲೋಕಜ್ಞಾನ:
ಕೌಶಲ:
ಗುರುಕುಲಗಳ ಸನಿಹದಲ್ಲಿ ವಿದ್ಯಾರ್ಥಿಗಳಿಗಾಗಿಯೇ ನಿರ್ಮಿತವಾಗುತ್ತಿರುವ ದೇಶೀ ಗೋವುಗಳ ಸಹಜಾವಾಸ- ಪುಟ್ಟ ಗೋಸ್ವರ್ಗ.
ಇದರಲ್ಲಿ:
ಜ್ಞಾನ:
{ವೇದಮೂಲವಾದ ಸಮಗ್ರ ಭಾರತೀಯ ವಿದ್ಯೆ-ಕಲೆಗಳ ಪರಿಚಯ}
ಮಹಾಪುರುಷಚರಿತ್ರೆ:
{ರಾಮಾಯಣ, ಮಹಾಭಾರತ, ಪುರಾಣ, ಇತಿಹಾಸ, ವರ್ತಮಾನಗಳನ್ನು ಆಧರಿಸಿ.}
ಕಲೆ:
ಗೃಹವಿಜ್ಞಾನ:
{ಸಸ್ಯಸಂರಕ್ಷಣೆ, ಕೃಷಿ}
ಆತ್ಮರಕ್ಷಣೆ:
ವಿಜ್ಞಾನ:
ಕಲೆ:
ವಾಣಿಜ್ಯ: